ವಿಜಯಪುರ: ವಿಜಯಪುರ ಜಿಲ್ಲೆಯಲ್ಲೂ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ ಆಗಿದೆ. ಜಿಲ್ಲೆಯ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ, ಸದ್ಯ ಈರುಳ್ಳಿಗೆ ಬೆಲೆ ಸಿಗದೆ ಇರೊದ್ರಿಂದ ಗ್ರಾಹಕರ ಬದಲಾಗಿ ಅನ್ನದಾತರ ಕಣ್ಣಲ್ಲಿ ನೀರು ಬರುತ್ತಿದೆ. ಬೆಲೆ ಸಿಗದೇ ರೈತರು ಕಂಗಾಲಾಗಿ ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂದು ಒತ್ತಾಯಿಸತೊಡಗಿದ್ದಾರೆ. ಇನ್ನೂ ರೈತರ ಪರವಾಗಿ ಶಾಸಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಅತಿ ಹೆಚ್ಚು ಈರುಳ್ಳಿ ಬೆಳೆಯುಬ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿದ ಪರಿಣಾಮವಾಗಿ ಇಂದು ರೈತರು ಕಂಗಾಲಾಗಿದ್ದಾರೆ. ಪ್ರತಿ ಕ್ವಿಂಟಲ್ ಈರುಳ್ಳಿಗೆ ಈಗ 300 ರಿಂದ 500ಕ್ಕೆ ಬಂದಿದೆ. ಇದರಿಂದಾಗಿ ಈರುಳ್ಳಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಈರುಳ್ಳಿಗೆ ಸೂಕ್ತ ಬೆಲೆ ಸಿಗದೇ ಕೆಲವು ರೈತರು ಮಾರುಕಟ್ಟೆಗೆ ಈರುಳ್ಳಿ ತಂದರೂ ಪ್ರಯೋಜನವಿಲ್ಲ ಎಂದು ತಮ್ಮ ತೋಟದಲ್ಲಿ ಹರಗಿ ಬಿಡುತ್ತಿದ್ದಾರೆ.
ಇನ್ನೂ ಕೆಲ ರೈತರು ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ತಂದರೆ ಅದಕ್ಕೆ ಸೂಕ್ತ ಬೆಲೆ ಸಿಗದ ಕಾರಣ ರೈತರು ಕಂಗಾಲಾಗಿದ್ದಾರೆ. ಈರುಳ್ಳಿಗೆ ಬೆಲೆ ಸಿಗದ ಕಾರಣ ತಲೆಯ ಮೇಲೆ ಕೈ ಹೊತ್ತು ಕುಳಿತು ಕೊಳ್ಳುವಂತಾಗಿದೆ. ಇನ್ನೂ ಸರ್ಕಾರದಿಂದ ಈರುಳ್ಳಿ ಬೆಳೆದ ರೈತರಿಗೆ ಏನಾದರೂ ಸಹಾಯ ಮಾಡಬೇಕು ಎಂಬುದು ರೈತರು ಒತ್ತಾಯಿಸುತ್ತಿದ್ದಾರೆ. ಈರುಳ್ಳಿ ರಫ್ತು ಮಾಡೊ ಮೂಲಕ ಸರಕಾರಗಳು ರೈತರ ಸಹಾಯಕ್ಕೆ ಧಾವಿಸಲಿ ಎಂದು ಮನವಿ ಮಾಡಿದ್ದಾರೆ. ಇನ್ನೂ 1 ಕೆಜಿ ಈರುಳ್ಳಿಗೆ ಐದು ರೂಪಾಯಿ ಬಂದು ತಲುಪಿದೆ ಇದರಿಂದ ಒಬ್ಬರ ರೈತ ಒಂದು ಕೆಜಿ ಈರುಳ್ಳಿ ತಗೆಯಲು ಕಡಿಮೆ ಎಂದರು ಎಂಟು ರೂಪಾಯಿ ಖರ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಕನಿಷ್ಠ ಈರುಳ್ಳಿ ಗೆ ಸಹಿತ 2 ಸಾವಿರ ಬೆಂಬಲ ಬೆಲೆ ಈ ಸರ್ಕಾರ ನಿಗದಿ ಮಾಡಬೇಕು ಇರದಿದ್ದರೆ ಮುಂಬರುವ ದಿನಗಳಲ್ಲಿ ರೈತರು ಹೋರಾಟ ಹಾದಿ ಹಿಡಯಲಿದ್ದಾರೆ ಎಂದು ಶಾಸಕ ಶಿವಾನಂದ ಪಾಟೀಲ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದಡೆ ಅತೀವೃಷ್ಠಿ ಇನ್ನೊಂದೆಡೆ ಅನಾವೃಷ್ಟೀ ಇಂದ ವಿಜಯಪುರ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ ಇದರ ಮದ್ಯೆ ಈಗ ಈರುಳ್ಳಿ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಈಡಾಗುವಂತಾಗಿದೆ. ಇನ್ನೂ ದರೂ ಸರ್ಕಾರ ಈ ಕುರಿತು ಮುತ್ವುರ್ಜಿ ವಹಿಸಿ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಲಿ ಎಂಬುದೇ ನಮ್ಮ ಆಶಯ. ರೈತರ ಸಹಾಯಕ್ಕೆ ಸರ್ಕಾರ ಅದ್ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.