ವಿಜಯಪುರ: ಆನ್ಲೈನ್ ಪಾರ್ಟ್ ಟೈಮ್ ಜಾಬ್ನಲ್ಲಿ ಕಮಿಷನ್ ನೀಡುವ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ವಿಜಯಪುರ ನಗರದ ಮೀನಾಕ್ಷಿ ಚೌಕ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸುನೀಲ ಮಾನಪ್ಪ ಹೊಸಮನಿ ಮೋಸ ಹೋದವರು. ಇನ್ನು ಟೆಲಿಗ್ರಾಂನಲ್ಲಿ ಆನ್ಲೈನ್ ಟೈಮ್ ಜಾಬ್ ಮಾಡಿ ಕಮಿಷನ್ ಮೇಲೆ ಹಣ ಪಡೆದುಕೊಳ್ಳುವಂತೆ ಆಮಿಷ ನೀಡಿದ್ದಾರೆ. ಇದನ್ನು ನಂಬಿ 1.76 ಲಕ್ಷ ನಗದು ಪಡೆದುಕೊಂಡು ಪಂಗನಾಮ ಹಾಕಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.