ವಿಜಯಪುರ: ಆನ್ಲೈನ್ ಮೂಲಕ ಲೋನ್ ನೀಡುವುದಾಗಿ ಸಾವಿರಾರು ನಗದು ಮೋಸಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.
ಅನಿಲ ಭೀಮಸಿಂಗ್ ಚವ್ಹಾಣ ಮೋಸ ಹೋದವರು. ಇನ್ನು ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಸರಿನಲ್ಲಿ ಆನ್ಲೈನ್ ಮೂಲಕ 51, 375 ನಗದು ವಂಚನೆ ಮಾಡಿದ್ದಾರೆ. ಇನ್ನು 8274084039 ನಂಬರಿನಿಂದ ಮೋಸ ಮಾಡಲಾಗಿದೆ. ಅದಕ್ಕಾಗಿ ಪತ್ತೆ ಮಾಡುವಂತೆ ಅನಿಲ ದೂರು ನೀಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.