ವಿಜಯಪುರ: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೊ ಅಂಟಿಸಿದ್ದು ತಪ್ಪಿಲ್ಲ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಬಿಡಿಎ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಭಾರತದ ಪಾರ್ಟಿಯೋ.. ಪಾಕಿಸ್ತಾನದ ಪಾರ್ಟಿಯೋ..? ನಮ್ಮ ಯುವ ಮೋರ್ಚಾ ಒಳ್ಳೆಯ ಕೆಲಸ ಮಾಡಿದ್ದಾರೆ. ಸಾವರ್ಕರ್ ಬಗ್ಗೆ ಚಿಲ್ಲರೆಯಾಗಿ ಮಾತನಾಡುವುದು ಕಾಂಗ್ರೆಸ್ ಸಂಸ್ಕೃತಿ ಆಗಿದೆ ಎಂದು ವಾಗ್ದಾಳಿ ಮಾಡಿದರು. ಸಾವರ್ಕರ್ ಫೋಟೊವನ್ನು ಸೋನಿಯಾ ಗಾಂಧಿ, ಆ ಗಾಂಧಿ, ಈ ಗಾಂಧಿ ಮಧ್ಯೆ ಹಾಕಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.