ವಿಜಯಪುರ: ಶಿವಮೊಗ್ಗದ ಗುರುಶಾಂತ ವೀರೇಶ್ವರ ಸೇವಾ ಸಮಿತಿ ವತಿಯಿಂದ ವಿಜಯಪುರ ನಗರದ ಲಿಂಗಾಯತ ಸಮುದಾಯ ಭವನದಲ್ಲಿ ಫೆಬ್ರವರಿ.26ರಂದು ಬೆಳಗ್ಗೆ 11ಕ್ಕೆ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಮಹಾಲಿಂಗಯ್ಯ ಶಾಸ್ತ್ರಿ ಎಸ್.ನಂದಗಾಂವಿ ಮಠ ಹೇಳಿದರು.
ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 22 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಸ್ಥಾಪನೆಯಾದ ಈ ಸಮಿತಿ ಸಮಾಜಮುಖಿ ಸೇವಾ ಟ್ರಸ್ಟ್ ಆಗಿದೆ. ಇದರಿಂದ ಲಿಂಗಾಯತ ಸಮುದಾಯಕ್ಕೆ ಹಲವು ಕೊಡುಗೆಗಳನ್ನು ನೀಡಲಾಗಿದೆ. ಸಮಾಜಕ್ಕೂ ಹಲವಾರು ಕೊಡುಗೆಗಳನ್ನು ಕೊಡುತ್ತಾ ಬಂದಿದ್ದು ಈಗ ರಾಜ್ಯದ 14 ಶಾಖೆಗಳಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಅನುಕೂಲ ಆಗಲಿ ಎಂದರು. ಶಿವಮೊಗ್ಗ, ಸಾಗರ, ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಬೆಳಗಾವಿಗಳಲ್ಲಿಯೂ ಕಾರ್ಯಕ್ರಮ ಮಾಡಿದ್ದೇವೆ. ಇದೀಗ 26ನೇ ತಾರೀಖಿನಂದು ಕೊನೆಯದಾಗಿ ವಿಜಯಪುರದಲ್ಲಿಯೂ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು. ವಧು-ವರರ ಸಮಾವೇಶದಲ್ಲಿ ಸರ್ಕಾರಿ ನೌಕರರು, ವಾಣಿಜ್ಯೋದ್ಯಮಿಗಳು, ಖಾಸಗಿ ಉದ್ಯಮಿಗಳು ಸೇರಿದಂತೆ ವಿಧವೆ, ವಿಧುರ, ವಿಶೇಷಚೇತನರೂ ಭಾಗವಹಿಸಬಹುದು. ಫೆಬ್ರವರಿ 26ರಂದು ವಿಜಯಪುರದ ಬಂಜಾರ ಹೈಸ್ಕೂಲ್ ಬಳಿಯ ಲಿಂಗಾಯತ ಭವನದಲ್ಲಿ ಸಮಾವೇಶಗಳನ್ನು ಆಯೋಜಿಸಲಾಗಿದೆ. www.lingayathweds.com ವೆಬ್ಸೈಟ್ಸ್ ಮೂಲಕ ಮದುವೆ ಸಂಬಂಧಗಳನ್ನು ಬೆಸೆಯುತ್ತಿದೆ. ಆಸಕ್ತರು 08352264130, 876248130 ನಂಬರ್ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಹಾಗೂ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದರು.