ವಿಜಯಪುರ: ಹರಿಹರ ಪಂಚಮಸಾಲಿ ವಚನಾನಂದ ಸ್ವಾಮಿಗೆ ಯೋಗ್ಯತೆ ಇಲ್ಲ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು. ಮಹಾಭಾರತ ರಾಮಾಯಣದಿಂದ ಇಂತಹವರು ಒಡೆಯುವ ಕೆಲಸ ಮಾಡ್ತಾರೆ ಎಂದು ಹರಿಹರ ಪಂಚಮಸಾಲಿ ಮಠದ ವಿರುದ್ಧ ಯತ್ನಾಳ ಕಿಡಿಕಾರಿದರು. ಅಲ್ಲದೇ, ಹರಿಹರ ಪಂಚಮಸಾಲಿ ಪೀಠ, ಉಳಿದಿದ್ದು ಸಚಿವ ನಿರಾಣಿಗೆ ಸೇರಿದ್ದಾಗಿವೆ. ಅಲ್ಲದೇ, ಪಂಚಮಸಾಲಿ ಸಮಾಜ ಒಡೆಯಲ್ಲ. ಬೇರೆ ಬೇರೆ ಪೀಠಗಳನ್ನು ಮಾಡಿಕೊಂಡು ಹೋಗ್ಲಿ ಅವರಿಗೆ ಕೆಲಸ ಇಲ್ಲ. ಎಷ್ಟು ಪೀಠಗಳಾದ್ರೂ ಜನರಿಗೆ ವಿಶ್ವಾಸ ಇರುವ ಪೀಠಕ್ಕೆ ಭಕ್ತರು ಬರ್ತಾರೆ. ಆದ್ರೇ, ಕಾವಿ ಹಾಕಿದವರು ಸ್ವಾಮಿಗಳು ಅಲ್ಲ ಎಂದರು. ಜೆಡಿಎಸ್, ಕಾಂಗ್ರೆಸ್ ನಲ್ಲಿರುವಂತಹ ಅನೇಕ ಶಾಸಕರು ಸಿಂ ಬಸವರಾಜ್ ಬೊಮ್ಮಾಯಿ ಹಾಗೂ ನಮ್ಮ ಸಂಪರ್ಕದಲ್ಲೂ ಇದ್ದಾರೆ ಯತ್ನಾಳ ಹೊಸ ಬಾಂಬ್ ಸಿಡಿಸಿದರು. ಇನ್ನೂ ಕೆಲವರು ಹೋಗುವವರು ಹೋಗುತ್ತಾರೆ, ಈ ಜಿಲ್ಲೆಯಲ್ಲೂ ಒಬ್ಬರು ಹೊಗೋಕೆ ಸಿದ್ಧವಾಗಿದ್ದಾರೆ. ಅವರು ಈಗಾಗಲೇ ಕಾಂಗ್ರೆಸ್ ನಾಯಕರೊಂದಿಗೆ ಗುಸುಗುಸು ಪಿಸುಪಿಸು ನಡೆಸಿದ್ದಾರೆ ಎಂದು ಪರೋಕ್ಷವಾಗಿ ಆ ಶಾಸಕನಿಗೆ ಯತ್ನಾಳ್ ಟಾಂಗ್ ನೀಡಿದರು.