ಕಲ್ಕತ್ತಾ: ಮೊಬೈಲ್(Mobile) ಯುಗದಲ್ಲಿ ಮೊಬೈಲ್ಗಳು ಹೊಸ ಹೊಸ ಅವಾಂತರ ಸೃಷ್ಟಿಸುತ್ತಿವೆ. ಹೌದು.. ! ದಿನದಿಂದ ದಿನಕ್ಕೆ ಮೊಬೈಲ್ ಯುಗ ಬದಲಾವಣೆ ಆಗುತ್ತಿದೆ. ದಿನನಿತ್ಯ ಮಾರ್ಕೆಟ್ಗೆ ಹೊಸ ಆವಿಷ್ಕಾರದ ಮೊಬೈಲ್ಗಳು ಬರುತ್ತಿವೆ. ಈ ಮೊಬೈಲ್ನಲ್ಲಿ ರೀಲ್ಸ್ ಮಾಡಲು ಹೆತ್ತವರು ತಮ್ಮ ಮುದ್ದಾದ ಮಗುವನ್ನೇ(Child) ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬ್ಯಾರಕ್ಪೋರ್ ಉಪವಿಭಾಗದಲ್ಲಿರುವ ದಂಪತಿ ಐಫೋನ್ ಕೊಳ್ಳುವ ಆಸೆಯಿಂದಾಗಿ ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿದ್ದಾರೆ. ಅದಕ್ಕಾಗಿ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ವಾಸ್ತವವಾಗಿ, ಎಂಟು ತಿಂಗಳ ಮಗು ನಾಪತ್ತೆಯಾಗಿದ್ದರೂ, ದಂಪತಿ ಮುಖದಲ್ಲಿ ಕೊಂಚವೂ ಬೇಸರವಾಗಲಿ, ಆತಂಕವಾಗಲಿ ಇರಲಿಲ್ಲ. ದಂಪತಿ ಬಳಿ ಹೊಚ್ಚ ಹೊಸ ಐಫೋನ್(IPhone) ಇರುವುದನ್ನು ಕಂಡು ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಲೀಸರ ತನಿಖೆಯಿಂದ ರೀಲ್ಸ್ ಮೇಲಿನ ಮೋಹ, ಐಫೋನ್ ಕೊಳ್ಳುವ ಆಸೆಯಿಂದಾಗಿ ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿರುವುದು ಗೊತ್ತಾಗಿದೆ. ದಂಪತಿಯನ್ನು ಜಯದೇವ್ ಘೋಷ್ ಮತ್ತು ಸತಿ ಎಂದು ಗುರುತಿಸಲಾಗಿದ್ದು, ಇದೀಗ ಪೊಲೀಸ್(Police) ವಶದಲ್ಲಿದ್ದು, ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ.