ವಿಜಯಪುರ: ಚಲಿಸುತ್ತಿದ್ದ ಸರ್ಕಾರಿ ಬಸ್ ಟೈಯರ್ ಬ್ಲಾಸ್ಟ್ ಆಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದ ದೇವರ ನಿಂಬರಗಿ ಕ್ರಾಸ್ ಸಮೀಪ ಸೋಮವಾರ ನಡೆದಿದೆ.
ಇನ್ನೂ ಚಾಲಕನ ಎನ್.ಎಚ್ ಮುಲ್ಲಾ
ಸಮಯ ಪ್ರಜ್ಞೆಯಿಂದ 45 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಎ 28 ಎಫ್ 2212 ನಂಬರಿನ ಬಸ್ ಇಂಡಿಯಿಂದ ಚಡಚಣ ಕಡೆ ಪ್ರಯಾಣಿಸುತ್ತಿದ 45 ಪ್ರಯಾಣಿಕರು ಜಸ್ಟ್ ಪಾರಾಗಿದ್ದಾರೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.