ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಶಾಸಕ ಎಂಬಿ ಪಾಟೀಲ ಪುತ್ರ ಬಸನಗೌಡ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಮನೆ ಮಗ ಬಸವನಾಡಿನ ಭಗೀರಥ ನಮ್ಮ ಎಂಬಿ ಪಾಟೀಲ ಪತ್ರಗಳನ್ನು ಬಿಡುಗಡೆಗೊಳಿದರು. ಅಲ್ಲದೇ, ಉದ್ಯೋಗ ಕಾಂತ್ರಿ, ಸರ್ವರಿಗೂ ಮನೆ, ಹೆಚ್ಚಿನ ನೀರಾವರಿ ವ್ಯವಸ್ಥೆ ಮಾಡಲಾಗುವುದು ಎಂದರು.
ಅಲ್ಲದೇ, ನಾಳೆಯಿಂದ ಬಬಲೇಶ್ವರ ಮತಕ್ಷೇತ್ರದಲ್ಲಿ ಬಂಗಾರದ ಬಬಲೇಶ್ವರ 2023 ರಿಂದ ಮತ್ತೊಮ್ಮೆ ಸುವರ್ಣಯುಗ ಪ್ರಚಾರ ಮಾಡಲಾಗುವುದು. ಶಾಸಕ ಎಂ.ಬಿ.ಪಾಟೀಲ ಅಭಿವೃದ್ಧಿ ಕಾರ್ಯಗಳ ಕುರಿತು ಡಾಕ್ಯುಮೆಂಟರಿ ವಿಡಿಯೋ ಮೂಲಕ ಪ್ರಚಾರ ಮಾಡಲಾಗುವುದು ಎಂದರು.