ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ರೋಗ ಹೆಚ್ಚಾಗುತ್ತಿದೆ. ಕಳೆದ ಜನವರಿರಿಂದ ನವೆಂಬರ್ ವರೆಗೆ ಜಿಲ್ಲಾ ಆರೋಗ್ಯ ಇಲಾಖೆ ಒಟ್ಟು 2863 ಜನರನ್ನು ಕೋವಿಡ್ ಪರೀಕ್ಷೆ ಒಳಪಡಿಸಿದೆ. ಅದರಲ್ಲಿ 435 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅದರಂತೆ ಚಿಕೂನ್ ಗುನ್ಯಾ ಸಂಬಂಧ 2479 ಜನರ ರಕ್ತ ಪರೀಕ್ಷೆಯನ್ನು ನಡೆಸಲಾಗಿದೆ. ಅದರಲ್ಲಿ 406 ಜನರು ಚಿಕೂನ್ ಗುನ್ಯಾ ಲಕ್ಷಣಗಳು ದೃಢಪಟ್ಟಿವೆ. ಅವರು ಸದ್ಯ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಚಿಕೂನ್ ಗುನ್ಯಾ ಹಾಗೂ
ಡೆಂಗ್ಯೂ ಲಕ್ಷಣಗಳು ಗ್ರಾಮೀಣ ಭಾಗಕ್ಕಿಂತ ಪಟ್ಟಣ ಪ್ರದೇಶದಲ್ಲಿ ಹೆಚ್ಚು ಕಾಣುತ್ತಿರುವ ಕಾರಣ ಆರೋಗ್ಯ ಇಲಾಖೆ ರೋಗ ಲಕ್ಷಣ ಹರಡುವ ಸೊಳ್ಳೆ ನಿಯಂತ್ರಣಕ್ಕೆ ಮುಂದಾಗಿದೆ ಎಂದು ಡಿಎಚ್ಓ ಡಾ. ಸುರೇಶ ಚವ್ಹಾಣ ಮಾಹಿತಿ ನೀಡಿದರು.