ವಿಜಯಪುರ: ಭಗೀರಥ ಖ್ಯಾತಿಯ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕಂಚಿನ ಪುತ್ಥಳಿ ಲೋರ್ಕಾಪಣೆಗೆ ಸಿದ್ಧಗೊಂಡಿದೆ. ಜಲಸಂಪನ್ಮೂಲ ಸಚಿವರಾಗಿ ತಾವು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಿರುವ ಕೃತಜ್ಞತೆಗಾಗಿ ಬಬಲೇಶ್ವರ ತಾಲೂಕಿನ ಸಂಗಾಗಪುರ ಎಸ್.ಎಚ್.ಗ್ರಾಮದ ಜನರು ಎಂ.ಬಿ.ಪಾಟೀಲರ ಪುತ್ಥಳಿ ನಿರ್ಮಿಸಲು ಮುಂದಾಗಿದ್ದಾರೆ.
ಈಗಾಗಲೇ ಎಂ.ಬಿ.ಪಾಟೀಲ ಅವರ ಕಂಚಿನ ಪ್ರತಿಮೆ ಪೂರ್ಣಗೊಂಡಿದ್ದು, ಮಾರ್ಚ್.17 ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಗ್ರಾಮದಲ್ಲಿ ಭರದಿಂದ ಸಿದ್ಧತೆ ನಡೆದಿವೆ.
ಭಗೀರಥ.. ಭಗೀರಥ ಎಂದು ಜನತೆ ಹಿಂಗಾ ಮಾಡೋದಾ..?
![](https://karnataka1news.com/wp-content/uploads/2023/03/MB-patil-1-860x478.jpg)