ಜನರ ಅರೋಗ್ಯ ಸುಧಾರಣೆಯಲ್ಲಿ ಫಾರ್ಮಸಿ ಕ್ಷೇತ್ರ ಪ್ರಮುಖ ಪಾತ್ರ

Karnataka 1 News
ಜನರ ಅರೋಗ್ಯ ಸುಧಾರಣೆಯಲ್ಲಿ ಫಾರ್ಮಸಿ ಕ್ಷೇತ್ರ ಪ್ರಮುಖ ಪಾತ್ರ

ವಿಜಯಪುರ; ಜನರ ಆರೋಗ್ಯ ಸುಧಾರಣೆಯಲ್ಲಿ ಫಾರ್ಮಸಿ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ.

ಬಿ.ಎಲ್.ಡಿ. ಇ ಸಂಸ್ಥೆಯ ಎಸ್. ಎಸ್. ಎಂ ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ನಡೆದ ವಾರ್ಷಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.

 

ಆರೋಗ್ಯ ವ್ಯವಸ್ಥೆಯ ಸುಧಾರಣೆಯ ಮೂಲಕ ಫಾರ್ಮಸಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆರೋಗ್ಯ ನಿರ್ವಹಣೆಯಲ್ಲಿ ಕೇವಲ ವೈದ್ಯರು ಮತ್ತು ನರ್ಸ್ ಗಳು ಮಾತ್ರವಲ್ಲ, ಫಾರ್ಮಸಿಸ್ಟಗಳ ಪಾತ್ರವೂ ಮುಖ್ಯವಾಗಿದೆ. ಔಷಧಿ ಸಂಶೋಧನೆ, ತಯಾರಿಕೆ, ವಿತರಣೆಯ ಮೂಲಕ ಹಾಗೂ ರೋಗಿಗಳ ಸುರಕ್ಷಿತ ಔಷಧೋಪಯೋಗವನ್ನು ಖಚಿತಪಡಿಸಲು ಫಾರ್ಮಸಿಸ್ಟಗಳು ಮುಖ್ಯ ಪಾತ್ರ ವಹಿಸುತ್ತಾರೆ. ಫಾರ್ಮಸಿ ಅತ್ಯುತ್ತಮ ವೃತ್ತಿಯಾಗಿದ್ದು, ಸಮಾಜಕ್ಕೆ ಅಗತ್ಯವಾಗಿದೆ. ಈ ಹಿನ್ಬೆಲೆಯಲ್ಲಿ ಹೊಸ ಔಷಧಿಗಳ ಅಭಿವೃದ್ಧಿಗೆ ಅಗತ್ಯವಾಗಿರುವ ಸಂಶೋಧನೆ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಅವರು ಹೇಳಿದರು.

ಕಾಲೇಜಿನ ನಿರ್ದೇಶಕ ಡಾ. ಆರ್. ಬಿ. ಕೋಟ್ನಾಳ ಮಾತನಾಡಿ, ಶಿಸ್ತು ಮತ್ತು ಪರಿಶ್ರಮದಿಂದ ವಿದ್ಯಾರ್ಥಿಗಳು ಸಾಧನೆ ಮಾಡಬಹುದು. ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಯ ಜೊತೆಗೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗಿದೆ. ದೇಶದ ಭವಿಷ್ಯ ಮತ್ತು ಸಮಾಜ ಸೇವೆಗಾಗಿ ವಿದ್ಯಾರ್ಥಿಗಳು ಕೇವಲ ಅಕಾಡೆಮಿಕ್ ಎಕ್ಸಲೆನ್ಸಗೆ ಮಾತ್ರ ಸೀಮಿತವಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತಲೂ ಗಮನಹರಿಸಬೇಕು ಎಂದು ಹೇಳಿದರು.

ಇದೇ ವೇಳೆ ಪಠ್ಯದ ಹೊರತಾದ ಚಟುವಟಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೆಳೆಯಿತು. ನೃತ್ಯ, ಗೀತೆ, ಹಾಸ್ಯ ಪ್ರಹಸನ ಮುಂತಾದ ಕಲಾತ್ಮಕ ಪ್ರದರ್ಶನಗಳು ನಡೆದವು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ, ಐ.ಕ್ಯೂ.ಎ.ಸಿ ಸಂಯೋಜಕ ಡಾ. ಬಸವರಾಜ ಹುಣಸಗಿ ಮತ್ತು ವಿನಾಯಕ ನಾಲಾ, ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿಯ ಸಂಯೋಜಕ ಸಂಗಪ್ಪ ತೇಲಿ, ಡಾ. ಚೇತನಕುಮಾರ ಪಾಟೀಲ ಉಪಸ್ಥಿತರಿದ್ದರು.

*1 Pharmacy Collage Annual Day*: ವಿಜಯಪುರ ನಗರದ ಬಿ.ಎಲ್.ಡಿ. ಇ ಸಂಸ್ಥೆಯ ಎಸ್. ಎಸ್. ಎಂ ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾಲೇಜಿನ‌ ವಾರ್ಷಿಕ ದಿನಾಚರಣೆ‌‌ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಡಾ. ಆರ್. ಬಿ. ಕೊಟ್ನಾಳ, ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

*2 Pharmacy Collage Annual Day*: ವಿಜಯಪುರ ನಗರದ ಬಿ.ಎಲ್.ಡಿ. ಇ ಸಂಸ್ಥೆಯ ಎಸ್. ಎಸ್. ಎಂ ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ವಾರ್ಷಿಕ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರನ್ನು‌ ಸನ್ಮಾನಿಸಲಾಯಿತು.‌‌ ಈ‌‌ ಸಂದರ್ಭದಲ್ಲಿ ಡಾ. ಆರ್. ಬಿ. ಕೊಟ್ನಾಳ, ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";