ವಿಜಯಪುರ: ಮುಂಗಾರು ಮಳೆ ತಡವಾದ್ರೂ ರೈತರು ವರುಣ ದೇವನನ್ನು ನೆನೆದು ಭೂಮಿ ತಾಯಿಯ ಸೇವೆಯಲ್ಲಿ ತಲ್ಲೀನರಾಗಿದ್ದಾರೆ. ಅಲ್ಲದೇ, ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತೊನಶ್ಯಾಳದ ರೈತ ಪುಂಡಲೀಕ ಉಪ್ಪಲದಿನ್ನಿ 12 ಗಂಟೆ ಅವಧಿಯಲ್ಲಿ ತನ್ನ ಎತ್ತುಗಳೊಂದಿಗೆ ಭರ್ತಿ 21 ಎಕರೆ ಭೂಮಿ ಉಳುಮೆ ಮಾಡಿದ್ದಾನೆ. ಉಪ್ಪಲದಿನ್ನಿ ಈ ಸಾಧನೆ ತೋರಿದ ರೈತ. ರೈತನ ಸಾಧನೆಯಲ್ಲಿ ಎತ್ತುಗಳ ಸಾಥ್ ಇದ್ದು, ರೈತನ ಜೊತೆ ಆ ಎತ್ತುಗಳು ಸಹ ಸಾಧನೆಯ ನಗೆ ಬೀರಿವೆ. ರೈತಾಪಿ ಕೆಲವಸನ್ನೇ ಮಾಡಿಕೊಂಡು ಬಂದಿದ್ರೂ ಸಹ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉಳುಮೆ ಮಾಡಿರಲಿಲ್ಲ. ಮಗ ಪುಂಡಲೀಕ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದಾಗ ಪ್ರೋತ್ಸಾಹ ನೀಡಿದ ಇವರು ಮಗನ ಸಾಧನೆಗೆ ಕಾರಣರಾಗಿದ್ದಾರೆ. ಎತ್ತುಗಳಿಂದ ರೈತರು ಸಾಧನೆ ಮಾಡುವ ವಿಚಾರ ಗೊತ್ತಾದಾಗ ತೊನಶ್ಯಾಳ ಗ್ರಾಮಕ್ಕೆ ಆಗಮಿಸಿ ರೈತರು ಅಭಿನಂದಿಸಿದ್ದಾರೆ.
https://fb.watch/lKduUskpby/?mibextid=6aamW6