ವಿಜಯಪುರ: ವಿಜಯಪುರದ 110/11ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದ 11ಕೆವಿ ಮಾರ್ಗದ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಪುಲಕೇಶಿ ಮತ್ತು ಇಂದಿರಾ ನಗರ 11ಕೆವಿ ವಿದ್ಯುತ್ ಮಾರ್ಗಗಳಲ್ಲಿ ಬರುವ ಜಿಲ್ಲಾ ಪಂಚಾಯತ್ ಕಚೇರಿ, ಹೊಸ ತಹಶಿಲ್ದಾರ್ ಕಚೇರಿ, ಜುಮ್ಮಾ ಮಸೀದಿ ಹಿಂದುಗಡೆ, ಕೆ.ಎಚ್.ಬಿ. ಕಾಲೋನಿ, ಶೆಡಜಿ ಮೊಹಲ್ಲ, ಹಕೀಮ್ ಚೌಕ, ಜಾಡರಗಲ್ಲಿ, ಮುಧೋಳ ಆಸ್ಪತ್ರೆ, ಶಾಂತಿ ನಗರ, ಕಸ್ತೂರಿ ಕಾಲೋನಿ, ರೈಲ್ವೇ ಸ್ಟೇಶನ್, ಪರ್ಲ ಹೋಟೆಲ, ಬೆಂಡಿಗೇರಿ ಓಣಿ, ದಿವಟಗೇರಿ ಗಲ್ಲಿ, ಹಾಷಿಮ್ ಪೀರ್ ದರ್ಗಾ ಹತ್ತಿರದ ಪ್ರದೇಶಗಳಲ್ಲಿ ಫೆ.11ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ವಿಜಯಪುರ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.