ವಿಜಯಪುರ: ಅನುಮಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಮನೆಯಲ್ಲಿ ಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಸಾಯಿ ಪಾರ್ಕ್ ಬಳಿ ನಡೆದಿದೆ.
ಪ್ರಕಾಶ ಲಕ್ಷ್ಮಣ ಹಳ್ಳಿಯ ಶವ ಪತ್ತೆಯಾಗಿದೆ. ಮಲಗಿರುವಯಲ್ಲೇ ಪ್ರಕಾಶ ಶವ ಸಿಕ್ಕಿದ್ದು ಹಲವು ಅನುಮಾನ ಕೇಳಿಬಂದಿದೆ. ಇದು ಕೊಲೆಯೋ ಅಥವಾ ಸಹಸ ಸಾವೋ ಎನ್ನುವುದು ಪೊಲೀಸ ತನಿಖೆ ಬಳಿಕ ತಿಳಿದು ಬರಲಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.