ವಿಜಯಪುರ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಬ್ಲ್ಯಾಕ್ ಪೇನ್ನಿಂದ ಹಾಳು ಮಾಡಿರುವ ಹಿನ್ನಲೆ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವಿಜಯಪುರ ನಗರದ ಕೋರ್ಟ್ ಸರ್ಕಲ್ ಬಳಿಯ ಗೋಡೆಯ ಮೇಲೆ ಕೇಜ್ರಿವಾಲ್ ಫೋಟೊ ಅಂಟಿಸಲಾಗಿತ್ತು. ಈ ಫೋಟೊ ಮೇಲೆ I Want Modi Ji, I Want BJP ಎಂದು ಬರೆಯಲಾಗಿದೆ. ಅದಕ್ಕಾಗಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಕೋರ್ಟ್ ಸರ್ಕಲ್ನಲ್ಲಿ ಸಂಚಾರ ತಡೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈ ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.