ವಿಜಯಪುರ: ವಾಣಿಜ್ಯ ಸಂಕೀರ್ಣದ ಎದುರಿನ
ಪೊಲೀಸ್ ಸ್ಟ್ಯಾಂಡ್ ಹಾಗೂ ಬ್ಯಾರಿಕೇಡ್ ಸ್ಥಳಾಂತರ ಮಾಡಬೇಕು ಎಂದು ವಿಜಯಪುರ ನಗರದ ಗಾಂಧಿಚೌಕ್ ಬಳಿ ಮಳಿಗೆ ಮಾಲೀಕರು ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ಗಾಂಧಿಚೌಕ್ ಸರ್ಕಲ್ನಲ್ಲಿ ಹೊಸ ವಾಣಿಜ್ಯ ಮಳಿಗೆಗಳು ಪ್ರಾರಂಭವಾಗಿದ್ದು, ಬಜಾರಕ್ಕೆ ಬರುವ ಗ್ರಾಹಕರು ಹೊಸ ಮಾರುಕಟ್ಟೆಗೆ ಅಡ್ಡಲಾಗಿ ಪೊಲೀಸ್ ಸ್ಟ್ಯಾಂಡ್ ಮತ್ತು ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದ ವ್ಯಾಪಾರಕ್ಕೆ ತೊಂದರೆ ಉಂಟಾಗಿರುತ್ತದೆ. ಗ್ರಾಹಕರ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿ ಬೇರೆ ಮಾರ್ಗಕ್ಕೆ ಹೋಗಲು ತೋರಿಸುತ್ತಾರೆ. ಆದ್ದರಿಂದ ಗ್ರಾಹಕರಿಗೆ ವ್ಯಾಪಾರ ಮಾಡಲು ಮಳಿಗೆ ಮಾಲೀಕರಿಗೆ ಹಾಗೂ ಗ್ರಾಹಕರಿಗೆ ತೊಂದರೆ ಉಂಟಾಗಿದೆ. ಅಲ್ಲದೇ, ಸಂಕೀರ್ಣದ ಪಕ್ಕದಲ್ಲಿರುವ ಬೇಕರಿ ಅಂಗಡಿಯ ತಾಡಪತ್ರಿಯಿಂದ ವ್ಯಾಪಾರ ಕುಂಠಿತ ಆಗಿದೆ. ಅದಕ್ಕಾಗಿ ಈ ಎಲ್ಲ ಸಮಸ್ಯೆ ಬಗೆಹರಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.