ವಿಜಯಪುರ: ಶ್ರೀ ಸಮ್ಮೇತಶಿಖರ್ಜಿ ತೀರ್ಥಕ್ಕೆ ಪರ್ಯಟನ ಸ್ಥಳವನ್ನು ಮಾಡಲು ಜಾರ್ಖಂಡ್ ಸರ್ಕಾರವು ಘೋಷಿಸಿದಕ್ಕೆ ಖಂಡಿಸಿ ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಜಿಲ್ಲಾ ಸಕಲ್ ಜೈನ್ ಸಂಘದವರು ಪ್ರತಿಭಟನೆ ನಡೆಸಿದರು.
ಜೈನ ಧರ್ಮದ ಪವಿತ್ರ ಹಾಗು ಅಸ್ಥೆಯ ಶ್ರೀ ಸಮ್ಮೇತಶಿಖರ್ಜಿ ತೀರ್ಥಕ್ಕೆ ಪರ್ಯಟನ ಸ್ಥಳವನ್ನು ಮಾಡಲು ಜಾರ್ಖಂಡ್ ಸರ್ಕಾರವು ಘೋಷಿಸಿದೆ. ಇದು ಖಂಡನೀಯ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಈ ನಿರ್ಣಯದಿಂದ ನಮ್ಮ ಸಮಾಜ ಹಾಗು ಧರ್ಮದವರಿಗೆ ನೋವುವಾಗಿದೆ. ಅದಕ್ಕಾಗಿ ತಕ್ಷಣವೇ ಜಾರ್ಖಂಡ್ ಸರ್ಕಾರ ನಿರ್ಣಯವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.