ವಿಜಯಪುರ: ಕಳ್ಳತನಗೈದಿರುವ ಸೆಂಟರಿಂಗ್ ಪ್ಲೇಟ್ಗಳು ಸಾಗಾಟ ಮಾಡುವ ವೇಳೆಯಲ್ಲಿ ಏಳು ಜನ ಆರೋಪಿಗಳು ಬಂಧಿಸಿರುವ ಘಟನೆ ವಿಜಯಪುರ ತಾಲ್ಲೂಕಿನ ತೊರವಿ ರಸ್ತೆಯಲ್ಲಿ ನಡೆದಿದೆ.
ಫರೀದ್ ಶೇಖ್, ಮಹಮ್ಮದ್ ಶಫೀಮ್ ಜಹಾಂಗೀರದಾರ್, ಅಜಯ್ ತಂತಿ, ಶಾಂತಿರಾಮ್ ಬೇದರಾಮ್, ಅಶಿತೋಷಕುಮಾರ ಜಗದೀಶಪ್ರಸಾದ್, ಭಕ್ಷಿಷ್ ಸಹಮ್ಮದ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, 8.75 ಲಕ್ಷ ಮೌಲ್ಯದ 1094 ಸೆಂಟ್ರಿಂಗ್ ಪ್ಲೇಟ್ ಹಾಗೂ 1.50 ಲಕ್ಷ ಮೌಲ್ಯದ ಟಾಟಾಏಸ್ ವಾಹನ ಸೇರಿದಂತೆ ಒಟ್ಟು 10.25 ಲಕ್ಷದ ವಸ್ತುಗಳನ್ನು ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಪಿಎಸ್ಐ ಜಿ.ಎಸ್. ಉಪ್ಪಾರ ಚಾಣಾಕ್ಷದಿಂದ ಆರೋಪಿಗಳ ಲಾಕ್ ಆಗಿದ್ದು, ಅದಕ್ಕಾಗಿ ಪೊಲೀಸ ಇಲಾಖೆ ಸೇರಿದಂತೆ ಜನತೆ ಶಹಬಾಷ್ ಗಿರಿ ನೀಡಿದ್ದಾರೆ. ಎಎಸ್ಐ ಪಿಎಸ್ ಗಬ್ಬೂರ, ಎಂಎನ್ ಮುಜಾವರ್, ಐವೈ ದಳವಾಯಿ, ಬಿವಿ ಪವಾರ್ ಸೇರಿದಂತೆ ಸಿಬ್ಬಂದಿಗಳು ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ.