ವಿಜಯಪುರ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ರಸ್ತೆಯಲ್ಲಿ ನಡೆದಿದೆ.
ಅಪ್ತಾಬ್ ಶೇಕ್, ಸಮೀರ ಬಾಗವಾನ್, ಸಾಧಿಕ್ ಸುಂಬಡ, ಸೈಯದ್ ಸುಂಬಡ ಬಂಧಿತ ಆರೋಪಿಗಳು. ಆರೋಪಿಗಳು ಟಂಟಂ ಗಾಡಿಯಲ್ಲಿ 930 ಕೆಜಿ ಅಕ್ಕಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಅಕ್ಕಿಯನ್ನು ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.