ವಿಜಯಪುರ: ಕೆಇಬಿ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಅಧಿಕಾರಿಯೋರ್ವ ಎಣ್ಣೆ ಪಾರ್ಟಿ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ನಡೆದಿದೆ. ಕೆಇಬಿ ಜೆಇ ಗೊಲ್ಲಾಳಪ್ಪ ನಾನಾಗೌಡ ಪಾಟೀಲ ಎಣ್ಣೆ ಪಾರ್ಟಿ ಮಾಡಿದ್ದಾನೆ ಸ್ಥಳೀಯರು ಆರೋಪಿಸಿದ್ದಾರೆ. ನೈಟ್ ಡ್ಯೂಟಿಯಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಜೆಇ ಪಾಟೀಲ ಸಕತ್ ಎಣ್ಣೆ ಪಾರ್ಟಿ ಮಾಡುವಾಗ ಸ್ಥಳೀಯರ ಕೈಗೆ ರೈಡ್ಹ್ಯಾಂಡ್ಯಾಗಿ ಸಿಕ್ಕಿಬಿದ್ದಿದ್ದಾನೆ. ನನಗೆ ಅವಕಾಶ ಇದೆ. ನಾನು ಪಾರ್ಟಿ ಮಾಡುತ್ತೇನೆ ಎಂದು ಜೆಇ ಪಾಟೀಲ ಹೇಳಿದ್ದಾನೆ. ಅದಕ್ಕಾಗಿ ಸ್ಥಳೀಯರು ಜೆಇ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.