ಬೀಳಗಿ: ರಾಜಕೀಯ ಹಿನ್ನೆಲೆಯ, ಯುವ ಸಮುದಾಯದ ಪ್ರತಿನಿಧಿಯಾಗಿರುವ ಸಂಯುಕ್ತ ಪಾಟೀಲ್ ಸಂಸದರಾಗಿ ಆಯ್ಕೆಯಾದಲ್ಲಿ ಬಾಗಲಕೋಟೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕುತ್ತಾರೆ ಎಂದು ಕೊಲ್ಹಾರ ಪಟ್ಟಣದ ಕಾಂಗ್ರೆಸ್ ಮುಖಂಡ, ಅಮಾನತ್ ಬ್ಯಾಂಕಿನ ಅಧ್ಯಕ್ಷ ಸಲೀಮ ಅತ್ತಾರ ಹೇಳಿದರು. ಪಟ್ಟಣದ ಕಾಂಗ್ರೆಸ್ ಮುಖಂಡ ಹಾಗೂ ವಕ್ಫ್ ಬೋರ್ಡ ಜಿಲ್ಲಾಧ್ಯಕ್ಷ ಅಬುಶಾಮಾ ಖಾಜಿ ಅವರ ಸ್ವಗೃಹದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು ಸಂಯುಕ್ತ ಪಾಟೀಲ್ ಅವರು ಜನಸೇವೆಯ ತುಡಿತ ಹೊಂದುವ ಮೂಲಕ ಬಾಗಲಕೋಟೆ ಜಿಲ್ಲೆಯಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ ಅವರಿಗೆ ಮತದಾರರು ಆಶೀರ್ವಾದಿಸಬೇಕು ಎಂದರು. ಸಂಯುಕ್ತ ಪಾಟೀಲ್ ಬಾಗಲಕೋಟೆ ಜಿಲ್ಲೆಯವರಲ್ಲ ವಲಸಿಗರು ಅನ್ನುವ ಕೂಗು ಹಾಸ್ಯಾಸ್ಪದ ಬಾಗಲಕೋಟೆ, ವಿಜಯಪುರ ಅಖಂಡ ಜಿಲ್ಲೆ ಇಬ್ಬಾಗ ಆಗಿರಬಹುದೇ ಹೊರತು ನಾವುಗಳು ಯಾವತ್ತು ಬಾಗಲಕೋಟೆ, ವಿಜಯಪುರ ಬೇರೆ ಎನ್ನುವ ಭಾವನೆ ಹೊಂದಿಲ್ಲ ಎಂದರು. ಮುತ್ಸದ್ಧಿ ರಾಜಕಾರಣಿ, ಅಭಿವೃದ್ಧಿಯ ಹರಿಕಾರರು ಎಂದು ಹೆಸರು ಪಡೆದಿರುವ ಸಚಿವ ಶಿವಾನಂದ ಪಾಟೀಲ್ ಅವರು ತಿಕೋಟಾ ಮತಕ್ಷೇತ್ರದಿಂದ ಬ. ಬಾಗೇವಾಡಿ ಮತಕ್ಷೇತ್ರಕ್ಕೆ ಬಂದು ಚುನಾವಣೆಗೆ ನಿಂತಾಗ ಮತಕ್ಷೇತ್ರದ ಜನರೆಲ್ಲ ಒಂದಾಗಿ ಬ.ಬಾಗೇವಾಡಿ ಮತಕ್ಷೇತ್ರಕ್ಕೆ ಶಿವಾನಂದ ಪಾಟೀಲರನ್ನ ಅಣ್ಣ ಬಸವಣ್ಣನವರು ಹರಿಸಿ ಕಳುಹಿಸಿದ ನಾಯಕ ಎಂದು ಆಶಿರ್ವಧಿಸಿದ ಪ್ರಯುಕ್ತ ಬ.ಬಾಗೇವಾಡಿ ಮತಕ್ಷೇತ್ರ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಹಾಗಾಗಿ ಬಾಗಲಕೋಟೆ ಜಿಲ್ಲೆಯ ಮತದಾರರು ಸಂಯುಕ್ತ ಪಾಟೀಲ್ ಅವರನ್ನು ಹೆಚ್ಚಿನ ಮತಗಳಿಂದ ಆಶಿರ್ವಧಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಬುಶಾಮಾ ಖಾಜಿ ಸಹಿತ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.