ವಿಜಯಪುರ: ವಿಜಯಪುರ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಯತ್ನಾಳ್ ಆಪ್ತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಇದೀಗ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಯತ್ನಾಳ್ ಆಪ್ತ ರಾಘವ್ ಅಣ್ಣಿಗೇರಿ ತಮ್ಮ ಫೇಸ್ಬುಕ್ನಲ್ಲಿ ವೀರಸಾವರ್ಕರ್ ವರ್ಸಸ್ ಟಿಪ್ಪು ಸುಲ್ತಾನ್ ಫಿಕ್ಸ್ ಎಂದು ಪೋಸ್ಟ್ ಹಾಕಿದ್ದಾರೆ. ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಅಬ್ದುಲ್ ಹಮ್ಮಿದ್ ಮುಶ್ರಿಫ್ಗೆ ಟಿಕೆಟ್ಗಾಗಿ ಘೋಷಣೆ ಹಿನ್ನೆಲೆ ಯತ್ನಾಳ್ ವೀರಸಾವರ್ಕರ್ಗೆ ಹಾಗೂ ಮುಶ್ರಿಫ್ರನ್ನು ಟಿಪ್ಪು ಸುಲ್ತಾನ್ ಗೆ ಹೋಲಿಸಿ ಪೋಸ್ಟ್ ಹಾಕಲಾಗಿದೆ. ಕಳೆದ ಬಾರಿ ಅಬ್ದುಲ್ ಹಮ್ಮಿದ್ ಮುಶ್ರಿಫ್ ವಿರುದ್ಧ ಕಡಿಮೆ ಅಂತರದಲ್ಲಿ ಗೆದ್ದಿದ್ದ ಯತ್ನಾಳ್ ಗೆದ್ದಿದ್ದರು.
ಸಮಗ್ರ ಅಭಿವೃದ್ಧಿ ಮಾಡಿ ಗುಂಡಾಗಳನ್ನು ಹದ್ದು ಬಸ್ತಿನಲ್ಲಿಟ್ಟು ಕಳೆದ 5 ವರ್ಷ ಅಹಿತಕರ ಘಟನೆ ನಡೆಯದಂತೆ ಆಡಳಿತ ನಡೆಸಿದ ಯತ್ನಾಳ್ ಮತ್ತೊಮ್ಮೆ ಎಂದು ಪೋಸ್ಟ್ ಮಾಡಿದ್ದಾರೆ.