ವಿಜಯಪುರ: ಸರ್ಕಾರಿ ಶಾಲೆಯಲ್ಲಿ ಕೈ ತೊಳೆಯುವ ತೊಟ್ಟಿಯ ಬಳಿ ಗೋಡೆ ಕಲ್ಲು ಕುಸಿದು ಬಿದ್ದಿರುವ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ವಿಜಯಪುರ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 1 ರಲ್ಲಿ ನಡೆದಿದೆ. ಎಂಟನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ತಲೆ ಮೇಲೆ ಜುನೇರಾ ಚೋಕದಾರ್ ಹಾಗೂ ಹುಷ್ದಾ ಫತೇಪೂರ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜುನೇರಾ ತಲೆಗೆ ಎಂಟು ಸ್ಟೀಚ್ ಹಾಕಲಾಗಿದೆ. ಹಳೆಯ ಗೋಡೆ ಶಿಥಿಲವಾಗಿ ಈ ಅವಘಡಕ್ಕೆ ಕಾರಣ ಆಗಿದೆ. ಅಲ್ಲದೇ, ಪಾಲಕರಲ್ಲಿ ಆತಂಕ ಮನೆ ಮಾಡಿದೆ. ಗೋಳಗುಮ್ಮಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)