ವಿಜಯಪುರ: ನಗರದ ಎಪಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಪ್ರದರ್ಶನದಲ್ಲಿ ನರ್ಸರಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವಿಜ್ಞಾನ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದ ಹಳ್ಳಿ ಮನೆ ನೋಡುಗರನ್ನು ಆಕರ್ಷಿಸಿತು. ಹಳ್ಳಿ ಮನೆಯು ಹಳೆಯ ಕಾಲದ ಸೊಗಡು ಮತ್ತು ಸಂಸ್ಕೃತಿಯನ್ನು ನೆನಪಿಸುತ್ತಿತ್ತು. ಇದರಲ್ಲಿ ಪ್ರಮುಖವಾಗಿ ನೇಗಿಲು ಹೊಡೆಯುವುದು, ಬೀಸುವುದು, ಕುಟ್ಟುವುದು, ಬಳೆ ಇಡಿಸುವುದು ಎಲ್ಲರ ಮೆಚ್ಚುಗೆ ಗಳಿಸಿದವು. ಒಟ್ಟಾರೆಯಾಗಿ ಹಳ್ಳಿ ಮನೆ ಎಲ್ಲರ ಮೆಚ್ಚುಗೆ ಗಳಿಸಿತು. ಅಷ್ಟೇ ಅಲ್ಲದೆ ಯುಕೆಜಿ ಮಕ್ಕಳ ವಿಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಪ್ರಸ್ತುತ ಪಡಿಸುವ ರೀತಿ ಕೇಳಿ ಎಲ್ಲ ಪಾಲಕರು ನಿರ್ಣಾಯಕರು ಬೆರಗಾದರು. ಒಟ್ಟಾರೆಯಾಗಿ ವಿಜ್ಞಾನ ಪ್ರದರ್ಶನವು ಯಶಸ್ವಿಯಾಗಲು ಶಾಲೆಯ ಮುಖ್ಯೋಪಾಧ್ಯ ರಜನಿ ಪಾಟೀಲ ಅವರು ಹಾಗೂ ಶಾಲೆಯ ಶಿಕ್ಷಕ ವೃಂದದವರು ಕಾರಣರಾದರು.