ವಿಜಯಪುರ: ಕೆನಾಲ್ನಲ್ಲಿ ಆಕಸ್ಮಿಕವಾಗಿ ಬಿದ್ದು ಯುವಕ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.
22 ವರ್ಷದ ದುರ್ಗಪ್ಪ ಪರಸಪ್ಪ ಗೊಲ್ಲರ ಮೃತಪಟ್ಟಿರುವ ದುರ್ದೈವಿ. ಇನ್ನು ಚಿಕ್ಕಪ್ಪನೊಂದಿಗೆ ಕೆನಾಲ್ನಲ್ಲಿ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಆದ್ರೇ, ಇಲ್ಲಿಯವರೆಗೂ ದುರ್ಗಪ್ಪನ ಶವ ಪತ್ತೆಯಾಗಿಲ್ಲ. ಶವಕ್ಕಾಗು ಹುಡುಕಾಟ ಆರಂಭವಾಗಿದೆ. ಮನಗೂಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.