ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಹಿನ್ನೆಲೆಯಲ್ಲಿ ಮೆ.7ರಂದು ಮತದಾನ ನಡೆಯಲಿದ್ದು, . ಜಿಲ್ಲೆಯ ಎಲ್ಲಾ 2085 ಮತಗಟ್ಟೆಗಳಲ್ಲಿ ಮುಕ್ತ, ಶಾಂತಿಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ಹಿನ್ನಲೆಯಲ್ಲಿ ಮೆ.5 ರ ಸಂಜೆ 6 ರಿಂದ ಮೇ 7 ರಂದು ಮತದಾನ ಮುಕ್ತಾಯವಾಗುವವರೆಗೆ ಜಿಲ್ಲೆಯಾದ್ಯಂತ ಕಲಂ 144 ಪ್ರತಿಭಂದಕಾಜ್ಞೆ ಜಾರಿ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾದ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ. ಮೇ 5 ರಂದು ಸಂಜೆ 6 ರಿಂದ ಮತದಾನ ಮುಗಿಯವವರೆಗೂ 5ಕ್ಕಿಂತ ಹೆಚ್ಚು ಜನರು ಗುಂಪು ಗುಂಪು ಸೇರುವುದು, ಮೆರವಣಿಗೆ, ಸಭೆ ಸಮಾರಂಭ ಜರಗಿಸುವುದು ನಿಷೇಧಿಸಿದೆ. ಅದಲ್ಲದೇ, ಶಸ್ತçಸ್ತಾçಸಗಳನ್ನು ತೆಗೆದುಕೊಂಡು ಸಂಚರಿಸುವುದು, ಮತಗಟ್ಟೆಗಳ 100 ಮೀಟರ್ ಸುತ್ತಮುತ್ತ ರಾಜಕೀಯ ಪಕ್ಷಗಳ ಪೋಸ್ಟರ್, ಬ್ಯಾನರ್ ಹಾಗೂ ಪ್ರಚಾರ, . ಸಾರ್ವಜನಿಕವಾಗಿ ಪ್ರಚೋಧನಕಾರಿ ಹೇಳಿಕೆ, ವ್ಯಕ್ತಿಗಳ ತೇಜೋವಧೆ, ಮತಗಟ್ಟೆಯ ಸುತ್ತಮುತ್ತ ಧ್ವನಿವರ್ಧಕಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿಸಲಾಗಿದೆ..