ವಿಜಯಪುರ: ಅಕ್ರಮವಾಗಿ ಸೇಂದಿ ಸಾಗಾಟ ಮಾಡುತ್ತಿದ್ದ ವೇಳೆಯಲ್ಲಿ ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಳಗುಣಕಿ ಕ್ರಾಸ್ ಬಳಿ ನಡೆದಿದೆ.
ಲಕ್ಷ್ಮಣ ಗಿರಿಮಲ್ಲ ಕನ್ನೂರ್ ಬಂಧಿತ ಆರೋಪಿ. ಇನ್ನೂ ಅಕ್ರಮವಾಗಿ ಲಕ್ಷ್ಮಣ ಸೇಂದಿ ಸಾಗಾಟ ವೇಳೆಯಲ್ಲಿ 15 ಲೀಟರ್ ಸೇಂದಿ, ಮಿನಿ ಮ್ಯಾಕ್ಸಿಮೋ ವಾಹನ ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.