ವಿಜಯಪುರ: ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿಯಾಗಿರುವ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ನಗರದ ಇಂಡಿ ಬೈಪಾಸ್ ಬಳಿ ನಡೆದಿದೆ.
60 ವರ್ಷದ ಶಾಂತಾಬಾಯಿ ಪರಶುರಾಮ ಪವಾರ್ ಮೃತಪಟ್ಟಿರುವ ದುರ್ದೈವಿ. ಇನ್ನು ಅಪರಿಚಿತ ವಾಹನ ಶಾಂತಾ ಬಾಯಿಗೆ ಡಿಕ್ಕಿ ಬಳಿಕ ಅಪರಿಚಿತ ವಾಹನ ಸಮೇತ ಸವಾರ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.