ವಿಜಯಪುರ: ಆರಕ್ಷಕರು ಎಂದರೆ ಕೇವಲ ಅಪರಾಧಿಗಳ ಮಟ್ಟ ಹಾಕುವದಿಲ್ಲ, ಅವರಿಗೂ ಕೆಲ ಸಾಮಾಜಿಕ ಜವಾಬ್ದಾರಿ ಗಳಿವೆ ಎನ್ನುವದನ್ನು ಅಕ್ಷಕರಕ್ಕಾಗಿ ಆರಕ್ಷಕರು ಎನ್ನುವ ವಿಶೇಷ ಸಂವಾದ ಏರ್ಪಡಿಸುವ ಮೂಲಕ ಶಾಲೆಯಿಂದ ಹೊರಗೂಳಿದ ಮಕ್ಕಳಿಗೆ ಮತ್ತೊಮ್ಮೆ ಶಿಕ್ಷಣದ ಮಹತ್ವವನ್ನು ರಾಜ್ಯ ಪೊಲೀಸ್ ಇಲಾಖೆ ಅರಿವು ಮೂಡಿಸುವ ಮಹತ್ವದ ಹೆಜ್ಜೆ ಇಟ್ಟಿದೆ.
ಸದಾ ಗುಂಡಿನ ದಾಳಿ, ಕೊಲೆ ಸುಲಿಗೆ, ದ್ವೇಷಗಳಿಂದ ಕೂಡಿರುವ ಭೀಮಾತೀರದ ತಟದಲ್ಲಿ ಅಕ್ಷರ ಕ್ರಾಂತಿಗೆ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕಕುಮಾರ ನಾಂದಿ ಹಾಡಿದ್ದಾರೆ. ಜಿಲ್ಲೆಯ ಚಡಚಣದಲ್ಲಿ ನಡೆದ ಅಕ್ಷರಕ್ಕಾಗಿ ಆರಕ್ಷಕರು ಹಾಗೂ ಅಗ್ನಿಪಥ ಅಗ್ನಿವೀರರೊಂದಿಗಿನ ಸಂವಾದದಲ್ಲಿ ಶಾಲೆಯಿಂದ ಹೊರಗಡೆ ಉಳಿದ ಮಕ್ಕಳಿಗೆ ಮತ್ತೆ ಶಾಲೆಗೆ ಬನ್ನಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎನ್ನುವ ಸಂದೇಶದೊಂದಿಗೆ ಮಕ್ಕಳ ಕಲಿಕೆಗೆ ಇರುವ ಅವಶ್ಯಕ ಉಪಕರಣಗಳನ್ನು ಮಕ್ಕಳಿಗೆ ವಿತರಿಸುವ ಮೂಲಕ ಅವರನ್ನುಮತ್ತೆ ಶಾಲೆಯತ್ತ ಕರೆದು ಕೊಂಡು ಬಂದರು.
ಇದೇ ವೇಳೆ ಮಾತನಾಡಿದ ಅಲೋಕಕುಮಾರ ಭೀಮಾತೀರ ಶಾಂತಿಧಾಮವಾಗಲು ಶಾಲೆಯಿಂದ ಹೊರಗೂಳಿದ ಮಕ್ಕಳಿಗೆ ಶಿಕ್ಷಣ ನೀಡುವದು ಅವಶ್ಯ, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುತುರ್ಜಿ ವಹಿಸಿ ಮಕ್ಕಳ ಶಿಕ್ಷಣ ಒತ್ತು ನೀಡಲು ಮುಂದಾಗಿದೆ ಎಂದರು.