ವಿಜಯಪುರ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಮ್ಮೆರವಾಗಿ ಬೆಳೆಯುತ್ತದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಯುವ ಮುಖಂಡ ಸಿದ್ದನಗೌಡ ರೆಡ್ಡಿ ಹೇಳಿದರು. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಅವರು, ಈ ಪಕ್ಷ ಬರುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲವು ಸಾಧಿಸುತ್ತದೆ. ಅಲ್ಲದೇ, ತಮ್ಮದೇ ಆದ ಕಾರ್ಯಶೈಲಿ ಮೂಲಕ ಸ್ಥಾಪನೆಯಾದ ಪಕ್ಷವಾಗಿದ್ದು, ನಾಡಿನ ಜನತೆಯ ನಾಡಿಮಿಡಿತವಾಗಿ ಈ ಪಕ್ಷವು ಉನ್ನತಮಟ್ಟಕ್ಕಡ ಬೆಳೆಯುತ್ತದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಅಸಮಾಧಾನ ಆಗಿದ್ದಾರೆ. ಈ ಮೂರು ಪಕ್ಷದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಸಮಾಜದಲ್ಲಿ ಬಡತನ, ನಿರುದ್ಯೋಗ, ರೈತರ ಸಂಕಷ್ಟ, ಗಡಿ ವಿವಾದಕ್ಕೆ ಬ್ರೇಕ್ ಹಾಕಿಲ್ಲ. ಅದಕ್ಕಾಗಿ ನಾಡಿನಲ್ಲಿ ಉದ್ಯೋಗ ಸೃಷ್ಟಿ, ರೈತರ ಬೆಳೆಗೆ ಸಮರ್ಪಕ ಬೆಲೆ ಮುಂತಾದವುಗಳ ಬಗ್ಗೆ ಅನೇಕ ಮುಂದಾಲೋಚನೆ ನಮ್ಮ ಪಕ್ಷ ಇಟ್ಟುಕೊಂಡಿದೆ. ಈ ಸಲ್ ನಮ್ಮ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡಬೇಕು ಎಂದರು.