ವಿಜಯಪುರ: ಕೌಟುಂಬಿಕ ಕಲಹ ಹಿನ್ನಲೆ ಪತ್ನಿಗೆ ಪತಿ ಚಾಕು ಇರಿದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ತಾಳಿಕೋಟ ರಸ್ತೆಯಲ್ಲಿ ನಡೆದಿದೆ. ಕಾಯಿಪಲ್ಯೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಕವಡಿಮಟ್ಟಿ ಗ್ರಾಮದ ಯಲ್ಲಮ್ಮ ಸಿದ್ದಪ್ಪ ಕಾಳಗಿ (36) ಗಾಯಗೊಂಡಿದ್ದಾಳೆ. ಪತಿ ಸಿದ್ದಪ್ಪ ಕಾಳಗಿ ಚಾಕು ಇರಿದು ಪರಾರಿಯಾಗಿದ್ದಾನೆ. ಎರಡು ವರ್ಷಗಳಿಂದ ಪತಿ ಪತ್ನಿ ದೂರವೇ ಇದ್ದು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಯಲ್ಲಮ್ಮಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಜಿಲ್ಲಾಸ್ಪತ್ರೆ ದಾಖಲು ಮಾಡಲಾಗಿದೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.