ವಿಜಯಪುರ: ಕೇಂದ್ರದ ಮಾಜಿ ಸಚಿವರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಹಾಗೂ ಮುಂದೆ ಮುಖ್ಯಮಂತ್ರಿಗಳಾಗಲೆಂದ ಅವರ ಅಭಿಮಾನಿಗಳು ಪ್ರಯಾಗ್ ರಾಜ ಗಂಗಾ ನದಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ನಂದು ಗಡಗಿ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರವೀಣ ಕೂಡಗಿ, ವಿಜಯ ಬೋಸಲೆ, ವಿವೇಕ ಬೈರಗೊಂಡ, ಸಂತೋಷ ರವರು ನದಿಯಲ್ಲಿ ಶಾಸಕ ಯತ್ನಾಳ ರವರ ಭಾವಚಿತ್ರದೊಂದಿಗೆ ಪ್ರಾರ್ಥನೆ ಮಾಡಿದ್ದಾರೆ.