ವಿಜಯಪುರ: ಗೋವುಗಳ ರಕ್ಷಣೆಗಾಗಿ ನಾವು ಇದ್ದೇವೆ ಎಂದು ಹೇಳಿ ಗೋವುಗಳ ಕಳ್ಳ ಸಾಗಾಣೆ ನಡೆಯುತ್ತಿದೆ ಎಂದು ಆರ್ಎಸ್ಎಸ್, ಭಜರಂಗದಳ, ವಿಎಚ್ಪಿ, ಶ್ರೀರಾಮ ಸೇನೆ ವಿರುದ್ಧ ಸಾಮಾಜಿಕ ಹೋರಾಟಗಾರ ಎಸ್ಆರ್ ಹಿರೇಮಠ ಗಂಭೀರ ಆರೋಪ ಮಾಡಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಒಂದು ಕಡೆ ಗೋವುಗಳ ರಕ್ಷಣೆ ಮಾಡುವ ನಾಟಕ ಮಾಡುವುದು. ಇನ್ನೊಂದೆಡೆ ಅವುಗಳನ್ನು ಕಳ್ಳಸಾಗಾಣೆ ಮಾಡಿ ಹಣ ಮಾಡುತ್ತಿದ್ದಾರೆ ಎಂದರು. ಅಲ್ಲದೇ, ಮೂ ಮೆ ರಾಮ, ಬಗಲ್ ಮೇ ಚೂರಿ ಎಂಬಂತೆ ಇವರು ಮಾಡುತ್ತಿದ್ದಾರೆ. ಇದರ ಬಗ್ಗೆ ದಾಖಲಾತಿ ಸಮೇತ ನಮ್ಮ ಬಳಿ ಇದೆ ಎಂದರು.