ವಿಜಯಪುರ: ಸಿದ್ದೇಶ್ವರ ಶ್ರೀಗಳ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲಾಗಿದೆ. ಶ್ರೀಗಳು ಗಂಜಿ, ನೀರು ಸೇವನೆ ಮಾಡ್ತಿದ್ದಾರೆ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಎಸ್.ಬಿ ಪಾಟೀಲ್ ಸೋಮವಾರ ಹೇಳಿದರು. ವಿಜಯಪುರ ಜ್ಞಾನಯೋಗಾಶ್ರಮದ ಶ್ರೀಗಳ ಹೆಲ್ತ್ ರಿಪೋರ್ಟ್ ಹಿನ್ನೆಲೆ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಪಲ್ಸ್, ಬಿಪಿ ಎಲ್ಲಾ ಚೆನ್ನಾಗಿದೆ.
ಭಕ್ತರು ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದರು. ಇನ್ನೂ ಆಹಾರ ಸೇವನೆ ಕಡಿಮೆ ಆಗಿದೆ. ಗಂಜಿ ನೀರು ಸೇವನೆ ಮಾಡ್ತಿದ್ದಾರೆ. ಶ್ರೀಗಳು ಮೂಮೆಂಟ್ ಇದೆ ಮಾತಾಡ್ತಾರೆ ಎಂದರು.