ವಿಜಯಪುರ: ನಗರದ ಆರಾಧ್ಯ ದೈವ ಶ್ರೀಸಿದ್ದೇಶ್ವರ ದೇವಾಲಯದ ಆವರಣದಲ್ಲಿರುವ ಶ್ರೀವೀರಭದ್ರೇಶ್ವರ ಸ್ವಾಮಿಯ 11ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಜಯಂತೋತ್ಸವ ಕಾರ್ಯಕ್ರಮವು ನಾಳೆಯಿಂದ ಆರಂಭ ಆಗಲಿದೆ. ನಾಳೆ (17ಯಿಂದ 19ರ ವರೆಗೂ) ಹಮ್ಮಿಕೊಳ್ಳಲಾಗಿದೆ. ಇನ್ನೂ ಸಿದ್ದೇಶ್ವರ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪದಾಧಿಕಾರಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗುವುದು. 17.ರ ಮುಂಜಾನೆ 8ಗಂಟೆಗೆ ಜೋರಾಪುರ ಪೇಟೆಯ ಶಂಕರಲಿಂಗ ದೇವಸ್ಥಾನದಿಂದ ಶ್ರೀಸಿದ್ದೇಶ್ವರ ದೇವಸ್ಥಾನದವರೆಗೆ ಶ್ರೀಭದ್ರಕಾಳಿ ದೇವಿಯ ನೂತನ ಮೂರ್ತಿ ಮೆರವಣಿಗೆ ಹಾಗೂ ಕುಂಭಮೇಳ, ಸಂಜೆ ಭಕ್ತಾದಿಗಳಿಂದ ಮತ್ತು ರಥೋತ್ಸವ ನಡೆಯಲಿದೆ. 18ರ ಬೆಳಿಗ್ಗೆ 4 ಗಂಟೆಗೆ ಮಹಾರುದ್ರಾಭಿಷೇಕ, ಎಂಟು ಗಂಟೆಗೆ ನಾಗಠಾಣ ಶ್ರೀಗಳ ಅಮೃತ ಹಸ್ತದಿಂದ ಭದ್ರಕಾಳಿ ದೇವಿಯನ್ನು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗುವುದು. 10 ಗಂಟೆಗೆ ರಥದ ವಿಶೇಷ ಪೂಜೆ 11:00 ಯಿಂದ 3:00 ವರೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಅದೇ ದಿನ ಸಾಯಂಕಾಲ ನಾಲ್ಕು ಗಂಟೆಗೆ ಶ್ರೀವೀರಭದ್ರೇಶ್ವರ ಹಾಗೂ ಭದ್ರಕಾಳಿ ಮಾತಾ ರಥ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯು ಶಾಸಕ ಯತ್ನಾಳ ಪುತ್ರ ರಾಮನಗೌಡ ಬಸನಗೌಡ ಪಾಟೀಲ್ ಯತ್ನಾಳ ಉಪಸ್ಥಿತಿಯಲ್ಲಿ ನಡೆಯುವುದು. 19ರ ಮುಂಜಾನೆ 5:30 ರಿಂದ ಶ್ರೀವೀರಭದ್ರೇಶ್ವರ ಸ್ವಾಮಿ ಭದ್ರಕಾಳಿಮಾತಾ ಭವ್ಯ ಮೂರ್ತಿಗೆ ಮಹಾ ರುದ್ರಭಿಷೇಕ, ಮುಂಜಾನೆ ಎಂಟು ಗಂಟೆಗೆ ಶ್ರೀವೀರಭದ್ರೇಶ್ವರ ಭದ್ರಕಾಳಿ ಮಾತಾ ಹಾಗೂ ಶ್ರೀಶಿವಯೋಗಿ ಸಿದ್ದೇಶ್ವರ ಪಲ್ಲಕ್ಕಿಯ ನಂದಿದ್ವಜ ಹಾಗೂ ಪುರವಂತರ ಸೇವೆ ವಾದ್ಯಗಳೊಂದಿಗೆ ಶ್ರೀನೀಲಕಂಠೇಶ್ವರ ದೇವಸ್ಥಾನದಿಂದ ಶ್ರೀವೀರಭದ್ರೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯುವುದು. ಮಧ್ಯಾಹ್ನ 12 ಗಂಟೆಗೆ ಭಕ್ತರಿಂದ ಅಗ್ನಿ ಪ್ರವೇಶ, ಸಂಜೆ ಐದು ಮೂವತ್ತು ಗಂಟೆಗೆ ಶ್ರೀವೀರಭದ್ರೇಶ್ವರ ಭದ್ರ ಕಾಳಿ ಮಾತಾ ಮಹಾ ರಥೋತ್ಸವ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಕಳಸಾರೋಹಣ ನಂತರ ರಥೋತ್ಸವದ ಉದ್ಘಾಟನೆ ನಗರದ ಶಾಸಕ ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ ಮಾಡಲಿದ್ದಾರೆ ಎಂದು ಜಾತ್ರಾ ಕಮಿಟಿಯ ಅಧ್ಯಕ್ಷ ಶ್ರೀಮಂತ ಜಂಬಿಗಿ ಹಾಗೂ ಪ್ರಚಾರ ಸಮಿತಿಯ ಸದಸ್ಯರಾದ ಶ್ರೀ ಸುರೇಶ ಜತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.