ವಿಜಯಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮೈಸೂರಿನ ಶೈಕ್ಷಣಿಕ ವರ್ಷ 2022-23ನೇ (ಜನವರಿ ಆವೃತ್ತಿಯ) ಸಾಲಿನ ಪ್ರಥಮ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ ಹಾಗೂ ಪ್ರಥಮ ಎಂಎ, ಎಂಕಾಂ, ಎಂಬಿಎ, ಸೇರಿದಂತೆ ವಿವಿಧ ಕೋರ್ಸ್ ಪ್ರವೇಶಕ್ಕೆ ಪ್ರವೇಶಾತಿ ಪ್ರಾರಂಭವಾಗಿದೆ. ಬಿಪಿಎಲ್ ಕಾರ್ಡನ್ನು ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ.15 ರಷ್ಟು ವಿನಾಯಿತಿ ನೀಡಲಾಗಿದೆ. ಪ್ರವೇಶಾತಿಯು ದಂಡಶುಲ್ಕವಿಲ್ಲದೇ ಪ್ರವೇಶ ಪಡೆಯಲು ದಿನಾಂಕ : 31-03-2023 ಕೊನೆಯ ದಿನವಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸಂಗಮೇಶ ಹಿರೇಮಠ ಮೊ: 9916783555 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.