ವಿಜಯಪುರ: ಉತ್ತರ ಕರ್ನಾಟಕ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಆದ್ರೇ, ಜನತೆಯ ದುಡ್ಡಿನಲ್ಲಿ ಸರ್ಕಾರ, ಶಾಸಕರು ಅಧಿವೇಶನ ಹೆಸರಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಜವಳಿ ಅಸೋಸಿಯೇಷನ್ ಅಧ್ಯಕ್ಷ ಯಾಸೀನ್ ಜವಳಿ ಆರೋಪಿದರು. ವಿಜಯಪುರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಆದ್ರೇ, ಸರ್ಕಾರ ಮಾತ್ರ ರಾಜಕೀಯ ಮಾಡಿಕೊಂಡು ಸಮಯ ಹಾಳು ಮಾಡುತ್ತಿದೆ. ಇನ್ನು ಉತ್ತರ ಕರ್ನಾಟಕಕ್ಕೆ ಕಚೇರಿಗಳು ವರ್ಗಾವಣೆ ಆದೇಶ ಆಗಿದೆ. ಆಲಮಟ್ಟಿಗೆ ನೀರಾವರಿ ಕಚೇರಿ ಶಿಫ್ಟ್ ಮಾಡುವಂತೆ ಆದೇಶ ಆಗಿದ್ರೂ, ಇಲ್ಲಿಯವರೆಗೂ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಕಿಡಿಕಾರಿದರು. ಅದಕ್ಕಾಗಿ ಮೋಸು ಮಸ್ತಿ ಮಾಡುವುದು ಬಿಟ್ಟು ಉತ್ತರ ಕರ್ನಾಟಕ ಸೇರಿದಂತೆ ಅಖಂಡ ಕರ್ನಾಟಕ ಅಭಿವೃದ್ಧಿ ಆಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.