ವಿಜಯಪುರ: ರಾಜ್ಯದಾದ್ಯಂತ ಟ್ರಾನ್ಸ-ಜೆಂಡರ್ಸ್ ಅವರ ಮೂಲ ಹಂತದ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಾಯೋಗಿಕವಾಗಿ ವಿಜಯಪುರ ಜಿಲ್ಲೆಯಲ್ಲಿ ಮಾರ್ಚ್ 10 ರಿಂದ 45 ದಿನಗಳ ಕಾಲ ಸಮೀಕ್ಷೆ ಕಾರ್ಯಕೈಗೊಳ್ಳಲಾಗುತ್ತಿದೆ ಎಂದು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಜಿಲ್ಲಾ ಮಟ್ಟದ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. ಟ್ರಾನ್ಸ-ಜೆಂಡರ್ಸ್ರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ, ಉದ್ಯೊಗ ಮತ್ತು ಶಿಕ್ಷಣ ಮೀಸಲಾತಿ ಒದಗಿಸಲು ಸಮುದಾಯದ ಜನಸಂಖ್ಯೆ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಮಾಹಿತಿ ಅತ್ಯಗತ್ಯವಾಗಿರುವುದರಿಂದ ಮೂಲ ಹಂತದ ಸಮೀಕ್ಷೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆ ಕಾರ್ಯ ಕೈಗೊಳ್ಳಲು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ಮೂಲಕ ‘ಕರಮಣಿ’ ವೆಬ್ ತಂತ್ರಾಂಶ ಮೂಲಕ ಟ್ರಾನ್ಸ್ ಜೆಂಡರ್ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ.
ಟ್ರಾನ್ಸ-ಜೆಂಡರ್ನ ಸಮುದಾಯದವರ ಮೂಲಕವೇ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿರುವುದು ವಿಶೇಷತೆಯಾಗಿದೆ. ಈಗಾಗಲೇ ಸಮೀಕ್ಷೆ ನಡೆಸುವವರನ್ನು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿ-ಸಿಬ್ಬಂದಿಗಳಿಗೆ ತಾಂತ್ರಿಕ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಅರಿವು ಮೂಡಿಸುವ ತರಬೇತಿಯನ್ನು ಸಹ ನೀಡಲಾಗಿದೆ. ಮೂಲ ಹಂತದ ಸಮೀಕ್ಷೆಯಲ್ಲಿ ವ್ಯಕ್ತಿಗತ ವಿವರ, ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುವುದು ಸೇರಿದಂತೆ ಸಮೀಕ್ಷೆಯನ್ನು 7 ಹಂತಗಳಲ್ಲಿ ವಿಂಗಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರ ಮೇಲುಸ್ತುವಾರಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಟ್ರಾನ್ಸಜೆಂಡರ್ ಮೂಲ ಹಂತದ ಪ್ರಾಯೋಗಿಕ ಸಮೀಕ್ಷೆ ನಡೆಸಲು ವಿಜಯಪುರ ನಗರ ಸಮೀಕ್ಷೆಗಾಗಿ ಕನಕದಾಸ ಬಡಾವಣೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ (ದೂ:08352-276773) ಉಪನಿರ್ದೇಶಕರ ಕಚೇರಿ, ವಿಜಯಪುರ ಗ್ರಾಮೀಣ ಪ್ರದೇಶದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ (ದೂ:08352-276391) ಬಾಲಭವನ ವಿಜಯಪುರ, ಬಸವನಬಾಗೇವಡಿ ತಾಲೂಕಿನ ವ್ಯಾಪ್ತಿಯಲ್ಲಿ ಬಸವನಬಾಗೇವಾಡಿ (ದೂ:08358-244083) ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ, ಇಂಡಿ ತಾಲೂಕಿನಲ್ಲಿ ಇಂಡಿ ತಹಶೀಲ್ದಾರ (ದೂ:08359-225076) ಕಚೇರಿಯಲ್ಲಿ, ಸಿಂದಗಿ ತಾಲೂಕಿನ ವ್ಯಾಪ್ತಿಯ ಸಮೀಕ್ಷೆಗಾಗಿ ಸಿಂದಗಿಯ ಬಸ್ ಸ್ಟ್ಯಾಂಡ್ ಎದರುಗಡೆ ಇರುವ (ದೂ:08488-221332) ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಲ್ಲಿ, ಚಡಚಣ ತಾಲೂಕಿನ ವ್ಯಾಪ್ತಿಯ ಸಮೀಕ್ಷೆಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ (ದೂ:08422-278071) ಟ್ರೇಜರಿ ಕಾಲನಿ ಇಂದಿರಾನಗರ ಮುರಡಿ ಚಡಚಣ ಹಾಗೂ ಮುದ್ದೇಬಿಹಾಳ ತಾಲೂಕಿನಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ (ದೂ:08356-220034) ಎಂ.ಜಿ.ಎಂ.ಕೆ. ಗ್ರೌಂಡ ಮಾರುತಿ ನಗರ ಮುದ್ದೇಬಿಹಾಳದಲ್ಲಿ ಸಮೀಕ್ಷೆ ಕಾರ್ಯ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ 45 ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 5-30ಗಂಟೆವರೆಗೆ ನಿಗದಿಪಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.