ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯನಿಗೆ ತಲೆ ಸರಿ ಇಲ್ಲ ಎಂದು ವಿಜಯಪುರ ನಗರದಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಪ್ರಧಾನಿ ಮರ್ಡರ್, ಸಂಸದ ಜಿಗಜಿಣಗಿ ಕುತ್ತಿಗೆ ಕೊಯುವ ಕೆಲಸ
ಸಂಘ ಪರಿವಾರದವರೂ ಮಾಡ್ತಾರಾ..? ಗುಂಡು ಹಾಕುವ ಕೆಲಸ ಆರ್ಎಸ್ಎಸ್ ಮಾಡಲ್ಲ. ಸಿದ್ದರಾಮಯ್ಯನ್ನು ಕೇಳಿ ಆರ್ಎಸ್ಎಸ್ ನಡೆಸಬೇಕಿಲ್ಲ. ಅದನ್ನು ನಡೆಸುವವರು ಇದ್ದಾರೆ ಎಂದು ಕಿಡಿಕಾರಿದರು. ಆರ್ಎಸ್ಎಸ್ನಿಂದ ಯಾರಿಗೂ ಏನು ಆಗಿಲ್ಲ. ಜವಾಬ್ದಾರಿ ಅರ್ಥ ಮಾಡಿಕೊಂಡು ಸಿದ್ದರಾಮಯ್ಯ ಮಾತನಾಡಬೇಕು. ಬರೀ ಆರ್ಎಸ್ಎಸ್ ಆರ್ಎಸ್ಎಸ್ ಅನ್ನೋದು ಅಲ್ಲ ಎಂದರು.
ಪಿಎಫ್ಐ ಏನು ಮಾಡಿದೆ ಅನ್ನೊದು ಗೊತ್ತಿಲ್ವಾ..?
ಎಲ್ಲಾ ಮುಸ್ಲಿಂರನ್ನು ಹಿಡಿದ್ದಿದ್ರಾ..? ದೇಶದ್ರೋಹಿ ಕೆಲಸ ಮಾಡಬಾರದು. ಭಯೋತ್ಪಾದಕ ಉತ್ಪಾದನೆ ಮಾಡಿದವರು ಇವರು ಎಂದರು.