ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಇತ್ತಿತ್ತಲಾಗಿ ದಾರಿ ತಪ್ಪಿ ಮಾತನಾಡುತ್ತಿದ್ದಾರೆ ಎಂದು ವಿಜಯಪುರದಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಆರ್ ಎಸ್ ಎಸ್ ರಾಜಕೀಯ ಪಕ್ಷವಲ್ಲ. ಅದೊಂದು ಸ್ವಯಂ ಸೇವಕರ ಪಕ್ಷ, ಸಂಘವಾಗಿದೆ. ಭಾರತದ ಏಳ್ಗಿಗಾಗಿ, ಸಂಸ್ಕೃತಿ ಉಳಿಸಿ ಬೆಳೆಸೋದಕ್ಕಾಗಿ ಪೂರ್ವಾಶ್ರಮ ತೊರೆದು ಸಂಘದಲ್ಲಿ ವಾಸ ಮಾಡ್ತಾರೆ. ಯಾರನ್ನೋ ಓಲೈಕೆ ಮಾಡೋದಕ್ಕೆ ಸಿದ್ದರಾಮಯ್ಯ ಮಾತನಾಡೋದು ಸರಿಯಲ್ಲ ಎಂದು ಕಿಡಿಕಾರಿದರು.