ವಿಜಯಪುರ: ಟ್ಯಾಂಕರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಮೂವರು ಸ್ಥಳದಲ್ಲಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಕ್ರಾಸ್ ಬಳಿ ಮಂಗಳವಾರ ನಡೆದಿದೆ. ದುರ್ಘಟನೆಯಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದು, ಬಿ.ಬಿ ಇಂಗಳಗಿ ಗ್ರಾಮದವರಾದ ಮಹಾಂತೇಶ ಕಾಸಣ್ಣ ಹಡಪದ (27), ಸದ್ದಾಂ ಬಂದಗಿಸಾಬ ನಾಯ್ಕೋಡಿ (27), ಮಂಜುನಾಥ ದೇವಪ್ಪ ದೊಡ್ಡಮನಿ (24) ಮೃತಪಟ್ಟಿರುವ ದುರ್ದೈವಿಗಳು. ಅಲ್ಲದೇ, ಟ್ಯಾಂಕರ್ ಚಾಲಕ ಎಸ್ಕೇಪ್ ಆಗಿದ್ದಾನೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.