ಸಿಕ್ಕಿಂ: ಉತ್ತರ ಸಿಕ್ಕಿಂನಲ್ಲಿ ಭಾರಿ ದುರಂತ ಘಟನೆ ಸಂಭವಿಸಿದೆ. ಸೇನಾ ವಾಹನ ಕಮರಿಗೆ ಉರುಳಿದ ಪರಿಣಾಮ 16 ಯೋಧರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಅಲ್ಲದೇ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನಾ ವಾಹನದಲ್ಲಿ 20 ಯೋಧರು ಗಡಿ ಭಾಗದ ಪೋಸ್ಟ್ಗಳತ್ತ ಸಾಗುತ್ತಿತ್ತು. ಈ ವೇಳೆ ಸ್ಕಿಡ್ ಆಗಿ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಉತ್ತರ ಬಂಗಾಳದ ಸೇನಾಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಗಿದೆ.