ವಿಜಯಪುರ: ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಹತ್ಯೆಗೈದಿರುವ ಘಟನೆ ವಿಜಯಪುರ ನಗರದ ರೇಡಿಯೋ ಕೇಂದ್ರ ಬಳಿ ನಡೆದಿದೆ. ಭೀಮಾತೀರದ ನಟೋರಿಯಶ್ ಹಂತಕ ಚಂದಪ್ಪ ಹರಿಜನ್ ಶಿಷ್ಯ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿದೆ. ಕಲಬುರ್ಗಿ, ವಿಜಯಪುರದ ಭೀಮಾತೀರದಲ್ಲಿ ಹಾವಳಿ ಹರಿಜನ ಇಟ್ಟಿದ್ದರು. ಅಲ್ಲದೇ, ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪನ ಮೇಲೆ ಪೈರಿಂಗ್ ನಡೆದಿತ್ತು. ಇನ್ನೂ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.