ವಿಜಯಪುರ: ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದ ಬೈಕ್ ಕಳ್ಳನಿಗೆ ಸಾರ್ವಜನಿಕರು ಧರ್ಮಧೇಟು ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಬೈಕ್ ಕದಿಯಲು ಬಂದವನಿಗೆ ಸಖತ್ ಗೂಸಾ ಬಿದ್ದಿವೆ. ಆದ್ರೇ, ಕಳ್ಳನ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ.
ಸರ್ಕಲ್ ನಲ್ಲಿ ನಿಲ್ಲಿಸಿದ್ದ ಬೈಕ್ ಕದಿಯಲು ಯತ್ನಿಸಿದ ವೇಳೆ ಬೈಕ್ ಮಾಲೀಕ ಗಮನಿಸಿ ಬೈಕ್ ಕದಿಯುತ್ತಿದ್ದವನಿಗೆ ಹಿಡಿದು ಥಳಿಸಿದ್ದಾರೆ. ತದನಂತರ ಇಂಡಿ ಶಹರ ಠಾಣೆ ಪೊಲೀಸ ಠಾಣೆಗೆ ಬೈಕ್ ಕಳ್ಳನ್ನು ಒಪ್ಪಿಸಿದ್ದಾರೆ.