ವಿಜಯಪುರ: ಅನುಮಾನಸ್ಪದ ರೀತಿಯಲ್ಲಿ
ಅಪರಿಚಿತ ವ್ಯಕ್ತಿಯ ಶವವೊಂದು ಮುಳ್ಳಿನ ಕಂಠಿಯಲ್ಲಿ ಪತ್ತೆಯಾಗಿರುವ ಘಟನೆ ವಿಜಯಪುರ ತಾಲ್ಲೂಕಿನ ಬರಟಗಿ ತಾಂಡದ ಬಳಿ ನಡೆದಿದೆ. ಸುಮಾರು 40-45 ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯ ಶವದ ಪಕ್ಕದಲ್ಲಿ ಚಪ್ಪಲಿ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಸಹಸ ಸಾವೋ ಎಂಬುದು ಪೊಲೀಸ ತನಿಖೆ ಬಳಿಕ ತಿಳಿದು ಬರಬೇಕಿದೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/11/IMG_20231124_163205-777x1024.jpg)