ಬೆಂಗಳೂರು:
ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಸಾಲು-ಸಾಲು ಹಗರಣಗಳ ಆರೋಪ ಹೆಚ್ಚಾಗುತ್ತಿದ್ದು ಮತ್ತು ಕೆಲವು ಸಚಿವರ ಮತ್ತು ಕೆಲವು ನಾಯಕರ ಪ್ರಮುಖ ಹುದ್ದೆಗಳ ಬದಲಾವಣೆ ಬಗ್ಗೆ ಜೋರಾಗಿ ಕೇಳಿಬರುತ್ತಿದ್ದ ಹೊತ್ತಿನಲ್ಲಿ ಈಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಿಂದ ರಾತ್ರೋರಾತ್ರಿ ವಾಪಸ್ ಬಂದು ದೀಡಿರನ್ನೇ ಸಚಿವರಿಗೆ ಬ್ರೇಕ್ ಫಾಸ್ಟ್ ಸಭೆ ಕರೆದಿರುವುದು ಬಾರಿ ಕೂತುಹಲ ಮೂಡಿಸಿದೆ, ಆಗಸ್ಟ್ 4ರಂದು ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸಲಿದ್ದು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಕೆಲ ಸಚಿವರ ಬದಲಾವಣೆ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಲಿದ್ದಾರೆ ಎನ್ನಲಾಗಿದೆ. ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ಸಚಿವ ಸಂಪುಟ ಬದಲಾವಣೆಯ ಚರ್ಚೆ ನಡುವೆ ಇಂದು ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸಹೋದ್ಯೋಗಿಗಳಿಗಾಗಿ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದಾರೆ.