K1N ಡೆಸ್ಕ್: ಹಲವು ರೀತಿಯಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿರುವುದನ್ನು ನಾವು ನೀವು ನೋಡಿದ್ದೇವೆ.. ಕೇಳಿದ್ದೇವೆ. ಆದ್ರೇ, ಈ ಜೋಡಿ ಮಾತ್ರ ಬರೋಬ್ಬರಿ 58 ಗಂಟೆ ಕಿಸಿಂಗ್ ಮಾಡಿ ದಾಖಲೆ ಮಾಡಿದ್ದಾರೆ.
ಹೌದು.. ಒಂದಲ್ಲ.. 10 ಗಂಟೆ ಅಲ್ಲ.. 58 ಗಂಟೆ ಸುದೀರ್ಘ KISSING ಮಾಡಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಥಾಯ್ಲೆಂಡ್ನ ಎಕ್ಕಚೈ ತಿರಾನರತ್ ಮತ್ತು ಲಕ್ಸಾನಾ ಈ ಜೋಡಿಯ ಹೆಸರು ಅತ್ಯಂತ ದೀರ್ಘ ಕಾಲದವರೆಗೆ ಪರಸ್ಪರರಿಗೆ ಮುತ್ತಿಕ್ಕಿದ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ತಿರಾನರತ್ ದಂಪತಿಯ 58 ಗಂಟೆ, 35 ನಿಮಿಷ, 58 ಸೆಕೆಂಡುಗಳ ಕಾಲ ಮುತ್ತಿಕ್ಕುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಥಾಯ್ಲೆಂಡ್ನ ಪಟ್ಟಾಯದಲ್ಲಿ ಪ್ರೇಮಿಗಳ ದಿನದಂದು ಆಯೋಜಿಸಿದ್ದ ಕಿಸ್ಸಾಥಾನ್ನಲ್ಲಿ ತಿರಾನರತ್ ದಂಪತಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಥಾಯ್ಲೆಂಡ್ನ ಈ ದಂಪತಿ ದಾಖಲೆ ನಿರ್ಮಿಸಿ 2 ಲಕ್ಷದ 69 ಸಾವಿರ ರೂಪಾಯಿ ಬಹುಮಾನ ಪಡೆದಿದ್ದಾರೆ. ಅಲ್ಲದೇ, 2 ವಜ್ರದ ಉಂಗುರಗಳನ್ನು ಸಹ ಪಡೆದಿದ್ದಾರೆ.