ವಿಜಯಪುರ: ಕುಡಿದ ನಶೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಚರಂಡಿಗೆ ನುಗ್ಗಿರುವ ಘಟನೆ ವಿಜಯಪುರದ ಗಣೇಶ ನಗರದಲ್ಲಿ ನಡೆದಿದೆ.
ನಗರ ನಿವಾಸಿ ರಾಹುಲ್ ಎಂಬುವರ ಕಾರ್ ಚರಂಡಿಗೆ ನುಗ್ಗಿದ್ದು, ಕಾರ್ ಸಂಪೂರ್ಣವಾಗಿ ಜಖಂಗೊಂಡಿದೆ. ಅಲ್ಲದೇ, Mh 12 kj 4236 ನಲ್ಲಿದ ಇಬ್ಬರಿಗೂ ಯಾವುದೇ ಗಾಯಗಳು ಆಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.