ವಿಜಯಪುರ: ಗಡಿ ವಿವಾದ ಮುಗಿದರೂ ರಾಜಕೀಯ ಪರಿಸ್ಥಿತಿ ಡೈವರ್ಟ್ ಮಾಡಲು ಮಹಾರಾಷ್ಟ್ರ ಸರ್ಕಾರ ಯತ್ನಿಸುತ್ತಿದೆ ಎಂದು ಶಾಸಕ ಎಂಬಿ ಪಾಟೀಲ್ ಮಹಾ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದಲ್ಲಿ ಮಾತನಾಡಿದ ಅವರು, ಗಡಿ ವಿವಾದವನ್ನು ಕೆಣಕುವ ಮೂಲಕ ಪಾಲಿಟಿಕಲ್ ಡೈವೋರ್ಟ್ ಮಾಡುತ್ತಿದೆ.
ಇವರ ಕ್ಯಾತೆ ತೆಗೆದರೆ ನಮಗೆ ಸೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟ, ಜತ್ ಸೇರಿದಂತೆ ಬಹಳ ಪ್ರದೇಶ ನಮಗೆ ಬರುತ್ತವೆ. ಇದೀಗ್ ಜತ್ ಭಾಗದ ಜನರು ಕರ್ನಾಟಕಕ್ಕೆ ಸೇರುತ್ತೇವೆಂದು ಮುಂದೆ ಬಂದಿದ್ದಾರೆ. ತಮ್ಮಲ್ಲಿರೋ ಪ್ರದೇಶವನ್ನೇ ಮಹಾರಾಷ್ಟ್ರದವರು ಅಭಿವೃದ್ದಿ ಮಾಡಿಲ್ಲ ಎಂದು ಕಿಡಿಕಾರಿದರು.